ಅಂಕೋಲಾ: ಶುಕ್ರವಾರ ತಡರಾತ್ರಿ ಗಂಗಾವಳಿ ನದಿಯ ಮೀನುಗಾರಿಕೆಗೆ ತೆರಳಿದ ವ್ಯಕ್ತಿಯೋರ್ವ ನಾಪತ್ತೆಯಾಗಿದ್ದಾರೆ.
ತಾಲ್ಲೂಕಿನ ಸಗಡಗೇರಿ ಪಂಚಾಯಿತಿ ವ್ಯಾಪ್ತಿಯ ಮೊಟನಕೂರ್ವೆಯ ಈಶ್ವರ ಲಕ್ಷ್ಮಣ ಹರಿಕಂತ್ರ(44) ನಾಪತ್ತೆಯಾದವರು. ಗಂಗಾವಳಿ ನದಿಯಲ್ಲಿ ಬಲೆ ಹಾಕಲು ದೋಣಿ ಸಮೇತ ತೆರಳಿದ್ದರು ಎನ್ನಲಾಗಿದೆ. ಶುಕ್ರವಾರ ತಡರಾತ್ರಿಯಿಂದಲೇ ಸ್ಥಳೀಯ ಮೀನುಗಾರರು ದೋಣಿ ಮೂಲಕ ತೆರಳಿ ಪತ್ತೆ ಕಾರ್ಯ ಮುಂದುವರೆಸಿದ್ದಾರೆ. ಗಂಗೆಕೊಳ್ಳದ ಅಳಿವೆಯಲ್ಲಿ ಈಶ್ವರ ಅವರ ದೋಣಿ ಪತ್ತೆಯಾಗಿದೆ. ಆದರೆ ಮೀನುಗಾರನ ಸುಳಿವು ದೊರೆಯದ ಹಿನ್ನಲೆ ಅಂಕೋಲಾ
ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ.