ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಪಂಚಾಯತ್ ವ್ಯಾಪ್ತಿಯಲ್ಲಿನ ಹೊಸ್ತೋಟದಲ್ಲಿ ಮದ್ಯದ ಅಂಗಡಿ ತೆರೆಯಲು ಪರವಾನಿಗೆ ನೀಡಬಾರದಾಗಿ ಸ್ಥಳೀಯ ಮಹಿಳೆಯರು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಹೆಗ್ಗರಣಿ ಹೊಸ್ತೋಟದಲ್ಲಿ ಎಲ್ಲರೂ ಶಾಂತಿ ಸಹಬಾಳ್ವೆಯಿಂದ ಇದ್ದೇವೆ. ಇಲ್ಲಿ ವಿದ್ಯಾರ್ಥಿ ನಿಲಯ, ದೇವಸ್ಥಾನಗಳಿದ್ದು ನಿಗದಿತ ಅಂತರಕ್ಕಿಂತ ಸಮೀಪದಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಇತ್ತೀಚಿಗೆ ಈ ಪ್ರದೇಶದಲ್ಲಿ ಮದ್ಯದ ಅಂಗಡಿ ತೆರೆಯುವ ತಯಾರಿ ನಡೆಯುತ್ತಿದ್ದು ಅದನ್ನು ಹಲವು ಬಾರಿ ವಿರೋಧಿಸಿದ್ದೇವೆ. ನಮ್ಮ ವಿರೋಧದ ನಡುವೆ ಕೂಡ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮದ್ಯದ ಅಂಗಡಿ ತೆರೆಯದೆ ಬಿಡುವುದಿಲ್ಲ ಎಂದು ಸವಾಲು ಹಾಕಿ ಸಮಾಜದ ಸ್ವಾಸ್ತ್ಯ ಹಾಳು ಮಾಡುವದಕ್ಕೆ ಮುಂದಾಗಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಹೆಂಡ ಮಾರುವವರ ಯಾದಿ ಸಹಿತ ಮನವಿ ಮಾಡಿದ್ದಾರೆ.