ಬ್ಲಾಕ್ ಎಂಡ್ ವೈಟ್ ಬೇಡ; ಬ್ಲಾಕ್ ಲೇಬಲ್ ಬೇಕು. ಸಾರಾಯಿಗೆ ಬೇಡಿಕೆಯಿಟ್ಟ ಚಿತ್ತಾಕುಲ ಪಿಎಸ್ಐ ಅಮಾನತ್ತು ಮಾಡಲು ಕರವೇ ಆಗ್ರಹ
ಕಾರವಾರ: ಚಿತ್ತಾಕುಲಾ ಪೊಲೀಸ್ ಠಾಣೆಯ ಪಿಎಸ್ಐ ಮಹಾತೇಶ ಮಾಲ್ಮೀಕಿ ಅವರು ತಮ್ಮ ವ್ಯಾಪ್ತಿಯಲ್ಲಿ ಸಾಕಷ್ಟು ಅಕ್ರಮಗಳನ್ನು ನಡೆಸಿದ್ದಾರೆ. ಮದ್ಯ,ಮರಳು ಸಾಗಾಟ ಸೇರಿದಂತೆ ಹಲವು ಅಕ್ರಮಕ್ಕೆ ಸಹಕಾರಿಯಾಗಿದ್ದರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ(ಪ್ರವೀಣ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಅಕ್ಷಯ ನಾಗೇಕರ್ ಆರೋಪಿಸಿದ್ದಾರೆ.
ಪಿಎಸ್ಐ ಅಕ್ರಮಗಳ ಕುರಿತಾದ ಸಾಕ್ಷ್ಯಗಳನ್ನು ಒಳಗೊಂಡ ಸಿಡಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಹಾಗೂ ಲೋಕಾಯುಕ್ತಕ್ಕೆ ಸಲ್ಲಿಸಲಾಗಿದೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು, ಅಮಾನತು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಪಿಎಸ್ಐ ಮಹಾಂತೇಶ ವಾಲ್ಮೀಕಿ ಮದ್ಯ ಮಾರಾಟಗಾರನೊಂದಿಗೆ ನಡೆಸಿದ ಸಂಭಾಷಣೆಯ ಆಡಿಯೋ ಸಾಕ್ಷಿಯಲ್ಲಿ ಅಡಿಷನಲ್ ಎಸ್ಪಿ ಸಾಹೇಬರು ಹೇಳಿದ್ದಾರೆ. ಬ್ಲ್ಯಾಕ್ ಲೇಬಲ್ ಸಾರಾಯಿ ಬೇಕೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಜುಲೈ 26, 2025 ರಂದು ರಾತ್ರಿ ಒಬ್ಬ ವ್ಯಕ್ತಿಯನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ. ಈ ಹಿಂದೆಯೂ ದಿಲೀಪ್ ಗಜಿನಕರ್ ಎಂಬುವವರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿತ್ತು. ಇಂತಹ ಘಟನೆಗಳಿಂದ ಚಿತ್ತಾಕುಲ ಠಾಣೆಯೆಂದರೆ ಸಾರ್ವಜನಿಕರು ಭಯಪಡುವಂತಾಗಿದೆ. ಪೊಲೀಸ್ ಇಲಾಖೆಗೆ ಬೇಕಾದ ಬಹುಕೋಟಿ ಹಗರಣದ ಆರೋಪಿಗೆ ಶುಭ ಹಾರೈಸಿದ್ದ ಕುರಿತು ಪಿಎಸ್ಐ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ದುರ್ಗಾಮಾತಾ ಕೋ ಆಪರೇಟಿವ್ ಬ್ಯಾಂಕಿನ ಲಿಂಗರಾಜ ಕಲ್ಲುಟಕರ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಅವರ ಕಾರನ್ನು ಅನಧಿಕೃತವಾಗಿ ವಶಕ್ಕೆ ಪಡೆದಿದ್ದರ ಬಗ್ಗೆ ಡಿವೈಎಸ್ಪಿ ಅವರು ಸಿಡಿ ಸಮೇತ ವರದಿ ಸಲ್ಲಿಸಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದೆ.