ಅಂಕೋಲಾ: ನಿವೃತ್ತ ಹೆಡ್ ಮಾಸ್ಟರ್ ಹೊನ್ನಪ್ಪ ರಾಕು ನಾಯಕ ಇವರು ಗುರುವಾರ ವಿಧಿವಶರಾಗಿದ್ದಾರೆ. ಮೂಲತಃ ತಾಲೂಕಿನ ವಂದಿಗೆ ಗ್ರಾಮದ ಅಲದ್ಮನೆಯವರಾಗಿದ್ದ ಇವರು ಕಳೆದ ಕೆಲ ವರ್ಷಗಳಿಂದ ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ - ಕೆರೆಕಟ್ಟಾ ವ್ಯಾಪ್ತಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಶಿಕ್ಷಕರಾಗಿ ಸುದೀರ್ಘ ಸರ್ಕಾರಿ ಸೇವೆ ಸಲ್ಲಿಸಿದ್ದ ಇವರು, ಜೋಯಿಡಾ, ಕಾರವಾರ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪವಾಗಿದ್ದರು.ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ನಿವೃತ್ತರಾಗಿದ್ದರು. ಶಿಸ್ತು ಮತ್ತು ಸರಳ ಜೀವನ,ನಗುಮುಖ ಮತ್ತು ಮಿತ ಭಾಷಿಯಾಗಿ ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದ ಇವರು ತಮ್ಮ ಆದರ್ಶ ವ್ಯಕ್ತಿತ್ವದ ಮೂಲಕ ಜನಮನ್ನಣೆ ಗಳಿಸಿದ್ದರು. ಮೃತರು, ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು-ಬಳಗ ತೊರೆದಿದ್ದಾರೆ. ಹಿರಿಯ ಸ್ನೇಹ ಜೀವಿ ಹೊನ್ನಪ್ಪ ನಾಯಕ ನಿಧನಕ್ಕೆ ಲಕ್ಷ್ಮೇಶ್ವರ ನಾಡವರ ಬಳಗದವರು , ಹಾಗೂ ವಂದಿಗೆ ಗ್ರಾಮಸ್ಥರು,ಜಿಲ್ಲೆಯ ಹಲವು ಗಣ್ಯರು ಮತ್ತು ನಾಯಕ ಕುಟುಂಬದ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯ ಕ್ರಿಯೆಯನ್ನು ಅಗಸ್ಟ್ 8 ರ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಅಂಕೋಲಾದ ಕೋಟೆವಾಡ ಹಿಂದೂ ಸ್ಮಶಾನ ಭೂಮಿ ( ಮುಕ್ತಿಧಾಮದಲ್ಲಿ ) ನೆರವೇರಿಸಲಾಗುವದೆಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.