ಕಾರವಾರ: ಹುಬ್ಬಳ್ಳಿಯಿಂದ ಗೋವಾಕ್ಕೆ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗೋವಾ ಪೊಲೀಸರು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಇನೋವಾ ಕಾರಿನಲ್ಲಿ ಸುಮಾರು 620 ಕೆಜಿ ಗೋ ಮಾಂಸವನ್ನು ಸಾಗಾಟ ಮಾಡುತಿದ್ದ ಹುಬ್ಬಳಿಯ ಕಾಸೆಗಳ್ಳಿಯ ಯಾಸಿನ್ ಬೆಪಾರಿ ಎನ್ನುವ ವ್ಯಕ್ತಿ ಕರ್ನಾಟಕದ ಗಡಿ ಅನುಮೋಡ್ ಚೆಕ್ ಪೋಸ್ಟ್ ನಲ್ಲಿದ್ದ ಪೊಲೀಸ್ ಇಲಾಖೆಯವರ ಕಣ್ತಪ್ಪಿಸಿ ಗೋವಾದ ಮಾಪಸಾ ಹೋಗುವಾಗ ಮೊಲೆಮ್ ಚಕ್ ಪೋಸ್ಟ್ ಬಳಿ ಗೋವಾ ಪೊಲೀಸರು ಹಿಡಿದು 620ಕೆಜಿ ಗೋಮಾoಸ ಹಾಗೂ ಇನ್ನೋವಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೊಲೆಂನ ಪಶು ವೈದ್ಯ ಅಧಿಕಾರಿ ಕೇತನ್ ಚೌಗುಲೆ ಪಂಚನಾಮೆ ನಡೆಸಿದ್ದಾರೆ. ಕೂಳೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಾಗೋಬಾ ಕಾಮತ್ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೈಭವಿ ಗವ್ಕಾರ್ ಮತ್ತು ಸಹೋದ್ಯೋಗಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.