Flash News
Monday, August 31, 2026
Logo Flash News
Monday, August 31, 2026
Logo
ಕಬ್ಬಿಣ ಕದ್ದವರು ಕಂಬಿ ಹಿಂದೆ;  ಆರೋಪಿಗಳನ್ನು ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿ.

ಕಬ್ಬಿಣ ಕದ್ದವರು ಕಂಬಿ ಹಿಂದೆ; ಆರೋಪಿಗಳನ್ನು ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿ.

August 06, 2025   |   Flash News

ಹೊನ್ನಾವರ: ಕಟ್ಟಡ ನಿರ್ಮಾಣಕ್ಕೆ ಇಟ್ಟಿರುವ ಕಬ್ಬಿಣದ ಸೆಂಟ್ರಿಂಗ್ ಶೀಟನ್ನು ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಹೊನ್ನಾವರ ಪೊಲೀಸರು ತನಿಖೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಮಂಕಿಯ ರಾಮಾ ತಂದೆ ಲಕ್ಷ್ಮಣ ನಾಯ್ಕ, ತಾಲ್ಲೂಕಿನ  ಕಾಸರಕೋಡ ರೋಷನ್ ಮೊಹಲ್ಲಾದಲ್ಲಿರುವ ಮಸೀದಿ ಹತ್ತಿರ ಹೊಸದಾಗಿ ಕಟ್ಟಡ ನಿರ್ಮಿಸಲು ಇಟ್ಟಿರುವ ಕಬ್ಬಿಣದ ಸೆಂಟ್ರಿಂಗ್ ಸೀಟ್‌ನ್ನು ಕಳವು ಮಾಡಿಕೊಂಡು ಹೋಗಿರುವ ಕುರಿತು ದೂರು ದಾಖಲಿಸಿದ್ದರು. ಪ್ರಕರಣದ ಪತ್ತೆಗಾಗಿ ಅನುಭವಿ ತಂಡವನ್ನು ನೇಮಿಸಲಾಗಿತ್ತು. ಖಚಿತ ಬಾತ್ಮಿ ಮೇರೆಗೆ ಆರೋಪಿತರಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತವೀರ ಅಹಮ್ಮದ ತಂದೆ ಮಹ್ಮದ ಇಸಾಕ ಸಾಬ್ (38)ಷಹಾದ್-ಉಲ್ಲಾ ತಂದೆ ನಜೀರ್ ಸಾಬ್ (35) ಮಹ್ಮದ ಮನ್ಸೂರ ತಂದೆ ಇಲಿಯಾಸ್ ಅಹ್ಮದ್ (28) ಕಲೀಮುಲ್ಲಾ ಕಲೀಂ ತಂದೆ ಭಕ್ಷೀ ಸಾಬ್ (49) ಇವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು ಆರೋಪಿತರು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ.

 ಆರೋಪಿತರರಿಂದ 200 ರೂಪಾಯಿ ಬೆಲೆ ಬಾಳುವ 180 ಕಬ್ಬಿಣದ ಸೆಂಟ್ರಿಂಗ್ ಸೀಟ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ 03 ಲಕ್ಷ ರೂ ಬೆಲೆಯ ಅಶೋಕ ಲೈಲಾಂಡ್ ದೋಸ್ತ ವಾಹನ ಒಟ್ಟೂ 5 ಲಕ್ಷ ರೂ ಬೆಲೆ ಬಾಳುವ ಸ್ವತ್ತನ್ನು ಜಪ್ತುಪಡಿಸಿಕೊಳ್ಳಲಾಗಿದೆ.

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.