ಗೋಕರ್ಣ: ಕೋಳಿಗಳನ್ನು ಕಾದಾಡಿಸಿ ಪಂಥಕಟ್ಟಿ ಜೂಜಾಟ ಆಡುತ್ತಿದ್ದವರಿಗೆ ಗೋಕರ್ಣ ಪೊಲೀಸರು ಕಾನೂನು ಪಾಠ ಕಲಿಸಿದ್ದಾರೆ.
ಇಲ್ಲಿನ ಬಂಕಿಕೊಡ್ಲಾ ಗ್ರಾಮದ ಸಮಿತ್ರಕೇರಿಯ ಕಾಲು ದಾರಿಯ ಬಳಿ ಕೋಳಿ ಜೂಜಾಟದಲ್ಲಿ ತೊಡಗಿದ್ದ ಮಂಜುನಾಥ ಗಣಪತಿ ನಾಯ್ಕ ಬಂಕಿಕೊಡ್ಲಾ, ರಕ್ಷಿತ್ ಶಾಂತರಾಮ ನಾಯ್ಕ್ ಕೆ ಸಿ ರೋಡ್ ಅಂಕೋಲಾ, ದುರ್ಗಾಪ್ರಸಾದ್ ನಾಯ್ಕ್, ವಿಷ್ಣು ಈಶ್ವರ ಅಂಬಿಗ ಕತಗಾಲ, ನಾಗರಾಜ ನಾಗಪ್ಪ ಪಟಗಾರ ಬಾಡ ಕುಮಟಾ ಇವರನ್ನು ಗೋಕರ್ಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಬೈಕ್, ನಗದು, ಹುಂಜಗಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣದ ದಾಖಸಿಕೊಂಡಿದ್ದಾರೆ.
ಗೋಕರ್ಣದಲ್ಲಿ ಇತ್ತೀಚಿಗೆ ಗಾಂಜಾ ಸೇವನೆ, ಜೂಜಾಟ ಮತ್ತು ಇತರ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದು ಪಿಎಸ್ಐ ಖಾದರ್ ಭಾಷಾ ಕಾರ್ಯವೈಕರಿಗೆ ಶ್ಲಾಘನೆ ವ್ಯಕ್ತವಾಗಿದೆ.