ಅಂಕೋಲಾ : ತಾಲೂಕಿನಲ್ಲಿ ಭಾನುವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಬಿರುಸಿನ ಗಾಳಿ ಮುಂದುವರೆದಿದೆ.
ಜುಲೈ 27 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೀಸಿದ ಭಾರೀ ಗಾಳಿಯಿಂದ, ಬೊಬ್ರುವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಕುಳಿ ಮಜಿರೆಯ ಸುರೇಶ ಲಕ್ಷ್ಮಣ ನಾಯ್ಕ ಇವರ ವಾಸ್ತವ್ಯದ ಮನೆ ಮೇಲೆ ಸಾಗುವಾನಿ ಮರವೊಂದು ಒರಗಿ ಬಿದ್ದು ಮನೆಯ ಮೇಲ್ಚಾವಣಿಯ ಹಂಚುಗಳು, ರೀಪುಗಳು, ಪಕಾಶೆಗಳು ಹಾನಿಗೊಂಡಿದ್ದಲ್ಲದೇ , ಬೃಹದಾಕಾರದ ಮರ ಖುಲ್ಲಾ ಪಡಿಸುವ ಸಂದರ್ಭದಲ್ಲಿ ಗೋಡೆಗಳು ಹಾನಿಯಾಗಬಹುದಾಗಿರುತ್ತದೆ ಎನ್ನಲಾಗಿದ್ದು, ರೂಪಾಯಿ 50000 ಹಾನಿ ಅಂದಾಜಿಸಲಾಗಿದೆ. ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.