ಸಿದ್ದಾಪುರ: ಇಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ ಸಾವಿನ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು ಸಾವಿನ ಶಂಕೆ ವ್ಯಕ್ತಪಡಿಸಿ ಬಾಲಕನ ತಾಯಿ ನೀಡಿದ ದೂರಿನಲ್ಲಿ ಆಘಾತಕಾರಿ ವಿಷಯ ಹೊರಬಂದಿದೆ.
ಗೋಕುಲ ಕೃಷ್ಣ ಗೌಡ ಸಿದ್ದಾಪುರ ತಾಲೂಕಿನ ಕಾನಸುರು ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ವ್ಯಾಸಂಗ ಮಾಡುತ್ತಿದ್ದು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿದ್ದ. ಆತನ ತಾಯಿ ಜಯಶ್ರೀ ಅವರು ನನ್ನನ್ನು ನೋಡಲು ಶಾಲೆಯ ಬಳಿ ಹೋದಾಗ ಕುತ್ತಿಗೆ ಭಾಗದಲ್ಲಿ ಸ್ವಲ್ಪ ಉಬ್ಬಿಕೊಂಡಿದ್ದನ್ನು ಗಮನಿಸಿ ವಿಚಾರಿಸಿದಾಗ ಗೋಕುಲ ಆರಂಭದಲ್ಲಿ ಕಾರಣ ಹೇಳದೆ ನಂತರ ಕೇಳಿದಾಗ ಅಬ್ಬು ಸರ್ ಕುತ್ತಿಗೆ ಹಿಡಿದು ಎತ್ತಿರುತ್ತಾರೆ, ಮನೆಗೆ ಬಂದಾಗ ಈ ವಿಚಾರವನ್ನು ಹೇಳುತ್ತೇನೆ ಎಂದು ತಿಳಿಸಿದ್ದ. ಏಪ್ರಿಲ್ ರಜೆಯಲ್ಲಿ ಮನೆಯಲ್ಲಿದ್ದಾಗ ತಾಯಿಯ ಬಳಿ ಹಲವು ವಿಚಾರವನ್ನು ಹಂಚಿಕೊಳ್ಳುತ್ತಾ ಅಬ್ಬು ಎನ್ನುವ ಹಿಂದಿ ವಿಷಯದ ಶಿಕ್ಷಕ 9ನೇ ತರಗತಿ ಹುಡುಗಿಯ ಜೊತೆ ಬಾತ್ರೂಮ್ ಸಮೀಪ ಅಸಭ್ಯವಾಗಿ ವರ್ತನೆ ಮಾಡುವುದನ್ನು ತಾನು ಕಣ್ಣಾರೆ ನೋಡಿದಾಗ ಅಬ್ಬು ಸರ್ ಗಮನಿಸಿ ಯಾರಿಗೂ ಹೇಳಬೇಡ ಹೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಸಿದ್ದ ಬಗ್ಗೆ ಹೇಳಿದ್ದಾನೆ. ಈ ವಿಚಾರವನ್ನು ತಾಯಿ ಜಯಶ್ರೀ ತಮ್ಮ ದೊಡ್ಡ ಮಗನ ಬಳಿ ಹೇಳಿದಾಗ ಅಬ್ಬು ಸರ್ ಈ ಮೊದಲು ಹಾರ್ಸಿಕಟ್ಟ ಮುರಾರ್ಜಿ ಶಾಲೆಯಲ್ಲಿದ್ದವರು ಆ ಸಮಯದಲ್ಲಿ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ವರ್ಗಾವಣೆ ಆಗಿರುವ ಕುರಿತು ತಿಳಿಸಿದ್ದಾನೆ. ಜೂನ್ 9 ರಂದು ಇಂದಿರಾ ಗಾಂಧಿ ವಸತಿ ಶಾಲೆಯ ನವೀನ ಸರ್ ಗೋಕುಲನ ತಂದೆಗೆ ಕರೆ ಮಾಡಿ ಸಿರಿಯಸ್ಸಿದ್ದು ತಾಯಿಯನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಆಗ ಜಯಶ್ರೀ ಶಾಲೆಯ ಅಡುಗೆ ಮಾಡುವವರಿಗೆ ಕರೆ ಮಾಡಿದಾಗ ಗೋಕುಲಗೆ ಪೆಟ್ಟಾಗಿ ಎಂದಿದ್ದು ಶಿರಸಿ ಸರ್ಕಾರಿ ಆಸ್ಪತ್ರೆಗೆ ಹೋದಾಗ ಸೋಶಿಯಲ್ ಸರ್ ಗೋಕುಲ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಮಗನ ಆತ್ಮಹತ್ಯೆಯಲ್ಲಿ ತಾಯಿಗೆ ಶಂಕೆ ವ್ಯಕ್ತವಾಗಿದ್ದು, ಅಬ್ಬು ಸರ್ ಎಂಬುವರು ಸಾಧ್ಯವಾಗಿ ವರ್ತಿಸಿದ್ದನ್ನು ನೋಡಿದಾಗ ತನ್ನ ಮಗನನ್ನು ಗದರಿಸುವುದು ಹಾಗೂ ಕುತ್ತಿಗೆ ಒತ್ತಿ ದಪ್ಪವಾಗಿರುತ್ತದೆ. ಗೋಕುಲ, ಅಬ್ಬು ಅವರ ಅಸಭ್ಯ ವರ್ತನೆ ವಿಚಾರವನ್ನು ಮತ್ತೆ ನೋಡಿರಬಹುದು ಹಾಗೂ ಯಾರಿಗಾದರೂ ಹೇಳಿದರೆ ಎಂದು ಅವರು ಭಯದಿಂದ ತನ್ನ ಮಗನ ಸಾವಿಗೆ ಕಾರಣವಾಗಿರಬಹುದು ಅಲ್ಲದೇ ಅದೇ ದಿನ ಅಬ್ಬು ಸರ್ ಬಿಸ್ಕೆಟ್ ತಿಂದ ಕಾರಣಕ್ಕೆ ಮಗನನ್ನು ಹೊಡೆದಿರುತ್ತಾರೆ. ವಸತಿ ನಿಲಯದಲ್ಲಿ ಗೋಕುಲ ಸಾಯುವ ಸಮಯಕ್ಕೆ ಕರೆಂಟ್ ಇರಲಿಲ್ಲ ಎಂದು ತಿಳಿಸಿದ್ದು ಊರನ ಎಲ್ಲೆಡೆ ಕರೆಂಟ್ ಇತ್ತು. ಹೀಗಾಗಿ ಮೇಲಿನ ಕಾರಣಗಳಿಂದ ಗೋಕುಲ ಕೃಷ್ಣ ಗೌಡ ಈತನ ಸಾವು ಆತ್ಮಹತ್ಯೆಯಲ್ಲ ಕೊಲೆಯಂದು ಜಯಶ್ರೀ ಅವರಿಗೆ ಶಂಕೆ ಮೂಡಿದ್ದು ಅದನ್ನು ಪೊಲೀಸ್ ದೂರಿನಲ್ಲಿ ದಾಖಲಿಸಿದ್ದಾರೆ.