Flash News
Monday, August 31, 2026
Logo Flash News
Monday, August 31, 2026
Logo
ವೃದ್ಧೆ ಹತ್ಯೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ.

ವೃದ್ಧೆ ಹತ್ಯೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ.

February 18, 2026   |   Flash News

ಶಿರಸಿ: ಸಿದ್ದಾಪುರದ ವೃದ್ಧೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಭಿಜಿತ್ ಮಡಿವಾಳಗೆ ಶಿರಸಿ 1 ನೇ ಸತ್ರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಬಿಎನ್ಎಸ್ 103ರ ಅಡಿಯಲ್ಲಿ ಶಿಕ್ಷೆ ಪ್ರಕಟಗೊಳಿಸಿದ್ದು, 32,000 ರೂ ದಂಡ ಮತ್ತು ಹೆಣ್ಣು ಮಕ್ಕಳಿಗೆ 50,000 ಪರಿಹಾರ ಕೊಡುವಂತೆ ನ್ಯಾಯಾಧೀಶರಾದ ಕಿರಣ್ ಕಿಣಿರವರಿಂದ ಆದೇಶ ಪ್ರಕಟವಾಗಿದೆ. ವೃದ್ಧೆ ಕುಟುಂಬದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ್ ಮಳಗೀಕರ್ ವಾದ ಮಂಡಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಸವಣ್ಣಗಲ್ಲಿಯಲ್ಲಿ ಡಿಸೆಂಬರ್ 25, 2024ರಂದು ಹತ್ಯೆ ನಡೆದಿತ್ತು. ಪಿಗ್ಮಿ ಸಂಗ್ರಾಹಕಿಯಾಗಿದ್ದ ಗೀತಾ ಹುಂಡೇಕರ್ ಕೊಲೆಯಾಗಿತ್ತು. ಅಭಿಜಿತ್ ಮಡಿವಾಳ (30) ವೃದ್ಧೆಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದ. ಕಳ್ಳತನಕ್ಕಾಗಿ ಮನೆಗೆ ನುಗ್ಗಿದ್ದ  ಆರೋಪಿ ಕಳ್ಳತನ ನಡೆಸಿ ವೃದ್ಧೆಯನ್ನ ಕೊಲೆಗೈದಿದ್ದ. ವೃದ್ಧೆಯ ಹತ್ತಿರ ಇದ್ದ ಹಣ ಹಾಗೂ ಅವಳ ಕಿವಿ ಓಲೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಮರ್ಡರ್ ನಡೆದು ವಾರದೊಳಗೆ ಆರೋಪಿಯನ್ನ ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.