ಅಂಕೋಲಾ: ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಮನೆ ಮತ್ತು ವೆಲ್ಡಿಂಗ್ ಶಾಪಿನ ಮೇಲ್ಚಾವಣಿ ಹೊತ್ತಿ ಉರಿದ ಘಟನೆ ಪಟ್ಟಣದ ಕುಂಬಾರಕೇರಿಯ ಬಳಿ ಸಂಭವಿಸಿದೆ.
ಇಲ್ಲಿನ ಮಹಾಲಸಾ ವೆಲ್ಡಿಂಗ್ ಶಾಪ್ ಹಾಗೂ ಅದಕ್ಕೆ ಹೊಂದಿಕೊಂಡಿರುವ ಮನೆಗೆ ಸೋಮವಾರ ಸುಮಾರು ರಾತ್ರಿ 10.30ಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಮನೆಯ ಮೇಲ್ಚಾವಣಿ ಕಟ್ಟಿಗೆಯನ್ನು ಹೊಂದಿರುವುದರಿಂದ ಕ್ಷಣಮಾತ್ರದಲ್ಲಿ ಬೆಂಕಿ ಹತ್ತಿ ಉರಿಯಿತು. ಪರಿಣಾಮವಾಗಿ ಮನೆಯಲ್ಲಿದ್ದವರು ಮತ್ತು ಸ್ಥಳೀಯರು ಆತಂಕಗೊಂಡರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದು ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಮನೆಗೆ ಬೆಂಕಿ ತಗುಲಿದ್ದ ಪರಿಣಾಮ ಹತ್ತಾರು ಜನರು ಸ್ಥಳದಲ್ಲಿ ಜಮಾವಣಿಗೊಂಡಿದ್ದಾರೆ.