Flash News
Monday, August 31, 2026
Logo Flash News
Monday, August 31, 2026
Logo
ವಿದ್ಯಾರ್ಥಿಗಳ ಬಳಿ ಸ್ಟ್ರಾಬೆರಿ ಕ್ವಿಕ್ ಮಾದಕ ವಸ್ತು ಮಿಶ್ರಿತ ಚಾಕಲೇಟ್ ಪತ್ತೆ: ಪೋಷಕರೇ ಎಚ್ಚರ

ವಿದ್ಯಾರ್ಥಿಗಳ ಬಳಿ ಸ್ಟ್ರಾಬೆರಿ ಕ್ವಿಕ್ ಮಾದಕ ವಸ್ತು ಮಿಶ್ರಿತ ಚಾಕಲೇಟ್ ಪತ್ತೆ: ಪೋಷಕರೇ ಎಚ್ಚರ

February 07, 2026   |   Flash News

ಗೋಕರ್ಣ: ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಯುವಜನರನ್ನು ಮಾದಕ ದ್ರವ್ಯಗಳಿಂದ ದೂರವಿಡಲು  ಶಾಲೆ ಮತ್ತು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ನಡುವೆ ಶಾಲಾ ಮಕ್ಕಳಲ್ಲಿ ಮಾದಕ ವಸ್ತು ಮಿಶ್ರಿತ ಚಾಕಲೇಟ ಸೇವನೆ ಪತ್ತೆಯಾಗುತ್ತಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ. 

ಗೋಕರ್ಣ ಸುತ್ತಮುತ್ತಲಿನ  ಹೈಸ್ಕೂಲ್ ಹಾಗೂ ಕಾಲೇಜುನ ವಿದ್ಯಾರ್ಥಿಗಳ ಬಳಿ ಈ ವಸ್ತು ಪತ್ತೆಯಾಗಿದ್ದು, ಗುಲಾಬಿ ಬಣ್ಣದ ಟೆಡ್ಡಿ ಬೇರ್ ಆಕಾರದ ಮಾತ್ರೆಗಳು ಕಂಡುಬರುತ್ತಿವೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಸಣ್ಣ ಬಿಳಿ ಚೀಲಗಳಲ್ಲಿ ತುಂಬಿ ಮಾರಾಟ ಮಾಡಲಗುತ್ತಿರುವ ಶಂಕೆ ವ್ಯಕ್ತವಾಗಿದೆ ಮಾದಕ ವಸ್ತುವಿನ ಮಾದರಿಯಲ್ಲಿ ಹಲ್ಲು ಮತ್ತು ತುಟಿಯ ನಡುವೆ ಇಟ್ಟುಕೊಂಡು ತರಗತಿಯಲ್ಲಿ ವಿದ್ಯಾರ್ಥಿಗಳು ಮಂಕು ಹಿಡಿದಂತೆ ಕುಳಿತುಕೊಳ್ಳುವ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಈ ರೀತಿಯ ವಸ್ತುವು ಮಾರಣಾಂತಿಕ ಪರಿಣಾಮಗಳಿಂದಾಗಿ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಇದನ್ನು ನಿಷೇಧ ಮಾಡಲಾಗಿದೆ.

ಇವುಗಳ ಸೇವನೆಯಿಂದ ಅತಿಯಾದ ಹೃದಯಬಡಿತ, ರಕ್ತದೊತ್ತಡ ಹೆಚ್ಚಾಗುವುದು, ದೇಹದ ಉಷ್ಣತೆ ಏರಿಕೆ ಮತ್ತು ಅತಿಯಾದ ಉತ್ಸಾಹ ಅಥವಾ ಆತಂಕ, ತೀವ್ರವಾದ ವ್ಯಸನ, ಹಲ್ಲುಗಳ ಕ್ಷಯ, ನೆನಪಿನ ಶಕ್ತಿ ಕುಂದುವುದು ಮತ್ತು ಮಾನಸಿಕ ಅಸ್ವಸ್ಥತೆ ಕಂಡುಬರುತ್ತದೆ.

ಕೆಲವು ಡೀಲರ್‌ಗಳು ಮಕ್ಕಳನ್ನು ಸೆಳೆಯಲು ಸ್ಟ್ರಾಬೆರಿ ಹಣ್ಣಿನ ರುಚಿ ಮತ್ತು ಬಣ್ಣ ಹೊಂದಿರುವ ವಸ್ತುವನ್ನು ಚಾಕೊಲೇಟ್ ರೂಪದಲ್ಲಿ ನೀಡುತ್ತಾರೆ. ಅಪರಿಚಿತರಿಂದ ಚಾಕೊಲೇಟ್ ಅಥವಾ ಸಿಹಿ ತಿಂಡಿಗಳನ್ನು ಪಡೆಯದಂತೆ ಮಕ್ಕಳಿಗೆ ಪೋಷಕರು ಎಚ್ಚರಿಕೆ ನೀಡಬೇಕಿದ್ದು ಸಂಶಯಾಸ್ಪದ ವಿಷಯ ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ  ನೀಡಿ ಎನ್ನುವುದು ಸಾಮಾಜಿಕ ಕಳಕಳಿಯ ಮನವಿಯಾಗಿದೆ..

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.