ಹೊನ್ನಾವರ: ಮಾತನಾಡುವುದಿದೆ ಬಾ ಎಂದು ಮಧ್ಯರಾತ್ರಿಯಲ್ಲಿ ಯುವಕನನ್ನು ರಿಕ್ಷಾ ನಿಲ್ದಾಣಕ್ಕೆ ಕರೆಸಿ ಗುಂಪುಗೂಡಿ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಕಿ ತಾಳಮಕ್ಕಿಯ ದರ್ಶನ ಈಶ್ವರ ನಾಯ್ಕ, ದೊಡ್ಡಗುಂದದ ಅಜಯ್ ಲಂಬೋದರ ನಾಯ್ಕ, ವಿನಾಯಕ ಈಶ್ವರ ನಾಯ್ಕ, ಶಶಾಂಕ ರಾಮಚಂದ್ರ ನಾಯಕ ಮೇಲೆ ದೂರು ದಾಖಲಾಗಿದೆ. ಆರೋಪಿತರು ತನ್ನ ತಮ್ಮ ಗುಳದಕೇರಿಯ ಸಚಿನ್ ಕಮಲಾಕರ ನಾಯ್ಕ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನವೀನ್ ಕಮಲಾಕರ ನಾಯ್ಕ ದೂರಿದ್ದು, ಆರೋಪಿಗಳು ಫೆ.1ರ ಮಧ್ಯರಾತ್ರಿ ಡಾಬಾದಲ್ಲಿ ಊಟ ಮಾಡುವಾಗ ಸಚಿನನ್ನು ನೋಡಿ ಗುರಾಯಿಸಿದ್ದಾರೆ. ನಂತರ ಆರೋಪಿ ದರ್ಶನ ನಾಯ್ಕ ಕರೆ ಮಾಡಿ ಮಾತನಾಡುವುದಿದೆ ಮಂಕಿ ಅರೆಯ ರಿಕ್ಷಾ ನಿಲ್ದಾಣಕ್ಕೆ ಬರುವಂತೆ ಹೇಳಿದ್ದು ಫೆ. 2 ರ ಮಧ್ಯರಾತ್ರಿ2 ಗಂಟೆಗೆ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಕಲ್ಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿ ಗಟ್ಟಿಯಾದ ವಸ್ತುವಿನಿಂದ ತೊಡೆಗೆ ಚುಚ್ಚಿದ್ದಾರೆ. ಅಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ.