Flash News
Monday, August 31, 2026
Logo Flash News
Monday, August 31, 2026
Logo
ತಹಶೀಲ್ದಾರ್ ಡಾ. ಚಿಕ್ಕಪ್ಪ ನಾಯಕ ವರ್ಗಾವಣೆ

ತಹಶೀಲ್ದಾರ್ ಡಾ. ಚಿಕ್ಕಪ್ಪ ನಾಯಕ ವರ್ಗಾವಣೆ

January 23, 2026   |   Flash News

ಅಂಕೋಲಾ: ತಾಲ್ಲೂಕಿನಲ್ಲಿ ಕ್ರಿಯಾಶೀಲಾ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ತಹಶೀಲ್ದಾರ್ ಡಾ. ಚಿಕ್ಕಪ ನಾಯಕ ಅಲ್ಪಾವಧಿಯಲ್ಲಿಯೇ ವರ್ಗಾವಣೆಗೊಂಡಿದ್ದಾರೆ. 

ಸ್ವಾತಂತ್ರ್ಯ ಸಂಗ್ರಾಮ ಭವನ ಅಭಿವೃದ್ಧಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಆರೋಗ್ಯ ಶಿಬಿರ, ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ, ಭೂ ದಾಖಲೆಗಳ ಡಿಜಿಟಲೀಕರಣ ಸೇರಿದಂತೆ ಅಲ್ಪಾವಧಿಯಲ್ಲಿಯೇ ಹಲವು ಕಾರ್ಯಗಳ ಮೂಲಕ ಮೆಚ್ಚುಗೆ ಗಳಿಸಿದ್ದರು. ಕಳೆದ ಕೆಲವು ವರ್ಷಗಳಿಂದ ತಾಲ್ಲೂಕಿನ ಪೂರ್ಣಾವಧಿ ತಹಶೀಲ್ದಾರರು ಇಲ್ಲದೇ ಹತ್ತಾರು ಕೆಲಸಗಳು ಅಡ್ಡಗೋಡೆಯ ಮೇಲೆ ದೀಪ ಎನ್ನುವಂತಿರುವಾಗ ಡಾ. ಚಿಕ್ಕಪ್ಪ ವರ್ಗಾವಣೆಗೊಂಡು ಇಲ್ಲಿಗೆ ಬಂದಿದ್ದರು. ಆದರೆ ವರ್ಷದೊಳಗೆ ಅವರ ವರ್ಗಾವಣೆಯಿಂದ ಮತ್ತೆ ತಹಶೀಲ್ದಾರರ ಸ್ಥಾನ ಪ್ರಭಾರಿ ನಿರ್ವಹಣೆಗೆ ಒಳಪಡಲಿದೆ. ವೈದ್ಯಕೀಯ ಅಧಿಕಾರಿಯೂ ಆಗಿ ಸೇವೆ ಸಲ್ಲಿಸಿದ ಡಾ.ಚಿಕ್ಕಪ್ಪ ನಾಯಕ, ತಮ್ಮ ಸ್ವಂತ ಜಿಲ್ಲೆಯಾದ ಬಾಗಲಕೋಟದ ಮುಧೋಳ ತಾಲೂಕಿನ ಗ್ರೇಡ್ -1 ತಹಶೀಲ್ದರರಾಗಿ ವರ್ಗಾವಣೆಗೊಂಡಿದ್ದಾರೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.