ಗೋಕರ್ಣ: ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿ ಮನೆಗೆ ವಾಪಸ್ ಬಾರದ ಹಿನ್ನಲೆ ವಿದ್ಯಾರ್ಥಿನಿಯ ತಾಯಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕುಮಟಾ ತಾಲ್ಲೂಕಿನ ಮೊರಬಾ ಗ್ರಾಮದ ವಿದ್ಯಾರ್ಥಿನಿ ಅಂಕೋಲಾ ತಾಲ್ಲೂಕಿನ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದು ಜನವರಿ 15ರಂದು ಎಂದಿನಂತೆ ಕಾಲೇಜಿಗೆ ತೆರಳಿದ್ದಾರೆ. ಮುಂಜಾನೆ ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ಸಂಜೆಯವರೆಗೂ ಮನೆಗೆ ಬಾರದ ಹಿನ್ನೆಲೆ ದೂರು ನೀಡಿದ ತಾಯಿ, ಅವಳನ್ನು ಯಾರೋ ಪುಸಲಾಯಿಸಿ ಕರೆದುಕೊಂಡು ಹೋಗಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.