Flash News
Tuesday, September 01, 2026
Logo Flash News
Tuesday, September 01, 2026
Logo
ಹಣ ಕೇಳಿದ್ದಕ್ಕೆ ದೊಣ್ಣೆ ಏಟಿನ ರುಚಿ ತೋರಿಸಿದ ಚಿಕ್ಕಪ್ಪ

ಹಣ ಕೇಳಿದ್ದಕ್ಕೆ ದೊಣ್ಣೆ ಏಟಿನ ರುಚಿ ತೋರಿಸಿದ ಚಿಕ್ಕಪ್ಪ

January 07, 2026   |   Flash News

ಕಾರವಾರ: ತಂದೆ ಮತ್ತು ಅಜ್ಜಿಯ ಬಳಿ ಹಣ ಕೇಳಿದಕ್ಕೆ ಸಹೋದರರಿಬ್ಬರ ಮೇಲೆ ಅವರ ಚಿಕ್ಕಪ್ಪ ಹಲ್ಲೆ ಮಾಡಿದ್ದಾರೆ ಎಂದು ಯುವಕರೊಬ್ಬರು ದೂರು ನೀಡಿದ್ದಾರೆ. ತಾಲ್ಲೂಕಿನ ಮಾಜಾಳಿ ಗಾಬೀತವಾಡದ ಶ್ಯಾಮ ಗೋವಿಂದ ಶೇರವಣಕರ ವಿರುದ್ಧ ದೂರು ದಾಖಲಾಗಿದೆ. ಅವರ ಅಣ್ಣನ ಮಗ ಪವನ ರಘುನಂದನ ಶೇರವಣಕರ ದೂರು ನೀಡಿದ್ದಾರೆ. ಪವನ ತನ್ನ ತಂದೆ ಮತ್ತು ಅಜ್ಜಿ ಲಕ್ಷ್ಮಿ ಬಳಿ ಖರ್ಚಿಗೆ ಹಣ ಕೊಡುವಂತೆ ಕೇಳಿದ್ದಾರೆ. ಅವರು ಇಲ್ಲ ಎನ್ನುವಾಗ ಮಧ್ಯ ಬಂದ ಚಿಕ್ಕಪ್ಪ ಶ್ಯಾಮ ಹಣ ಕೇಳಿ ಯಾಕೆ ಗಲಾಟೆ ಮಾಡುತ್ತೀಯ ಎಂದು ಕಟ್ಟಿಗೆ ದೊಣ್ಣೆಯಿಂದ ತಲೆಯ ಹಿಂಬದಿಗೆ ಹಾಗೂ ಎಡಗಣ್ಣಿನ ಹತ್ತಿರ ಹಲ್ಲೆ ಮಾಡಿದ್ದಾರೆ. ಇದನ್ನು ತಪ್ಪಿಸಲು ಬಂದ ಪವನ್ ಅಣ್ಣ ರೋಹಿತ್ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ಚಿಕಿತ್ಸಾ ಕೊಠಡಿಯಲ್ಲಿ ನೀಡಿದ ಪವನ್ ಹೇಳಿಕೆಯ ಮೂಲಕ ದೂರಿದ್ದಾರೆ

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.