ಅಂಕೋಲಾ: ಪ್ರೀತಿಯ ವಿಷಯಕ್ಕೆ ನೊಂದು ಪಟ್ಟಣದ ಅಸ್ಲಗದ್ದೆಯಲ್ಲಿ ಯುವಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ಮೀನು ಮಾರುಕಟ್ಟೆ ಹತ್ತಿರದ ದುಗಾ೯ದೇವಿ ದೇವಸ್ಥಾನದ ಅಚ೯ಕ ಪವನ್ ವಿಠಲಕರ (26) ಮೃತ ಪಟ್ಟವರು. ಮಂಗಳವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದು ಡೆತ್ ನೋಟ್ ನಲ್ಲಿ ಆತ್ಮಹತ್ಯೆಗೆ ಕಾರಣವನ್ನು ಉಲ್ಲೇಖಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಗುರುನಾಥ ಹಾದಿಮನೆ ಭೇಟಿನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.