Flash News
Tuesday, September 01, 2026
Logo Flash News
Tuesday, September 01, 2026
Logo
ಕಾನೂನು ಬಾಹಿರ ಮರಳು ಸಾಗಣೆ ವಾಹನ ವಶಕ್ಕೆ ಪಡೆದ ಕುಮಟಾ ಪೊಲೀಸ್

ಕಾನೂನು ಬಾಹಿರ ಮರಳು ಸಾಗಣೆ ವಾಹನ ವಶಕ್ಕೆ ಪಡೆದ ಕುಮಟಾ ಪೊಲೀಸ್

January 06, 2026   |   Flash News

ಹೊನ್ನಾವರ: ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ಸಾಗಿದ್ದು  ಕಡಿವಾಣ ಹೇರುವವರು ಕೈಕಟ್ಟಿ ಕುಳಿತುಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಪಸ್ವರಗಳು ತೀವ್ರವಾಗಿವೆ. ಇದರ ಬೆನ್ನಲ್ಲೇ ಹೊಸ ವರ್ಷಕ್ಕೂ ಅಕ್ರಮ ಮರಳುಗಾರಿಕೆ ಮುಂದುವರೆದಿದ್ದು ಹೊನ್ನಾವರದಿಂದ ಅಂಕೋಲಾ ಕಡೆಗೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವ ವಾಹನ ಒಂದನ್ನು ಕುಮಟಾ ಪೊಲೀಸರು ತಡೆ ಹಿಡಿದು ವಶಕ್ಕೆ ಪಡೆದಿದ್ದಾರೆ.

ಜನವರಿ 2ರಂದು ಮಧ್ಯರಾತ್ರಿ ಕುಮಟಾ ಸಿಪಿಐ ಯೋಗೀಶ್ ತಮ್ಮ ಸಿಬ್ಬಂದಿ ಸಂಜೀವ ನಾಯ್ಕ ಮತ್ತು ಶಿವಾನಂದ ಜಾಡರ ಅವರೊಂದಿಗೆ ಇಲಾಖೆ ಜೀಪ್ ನಲ್ಲಿ ಶಹರದ ಗಸ್ತು ತಿರುಗುವ ವೇಳೆ ಸಂಜೆ ಸುಮಾರು ಏಳು ಗಂಟೆಗೆ ಕುಮಟಾ ಪಟ್ಟಣದ ಗಿಬ್ ಸರ್ಕಲ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಣೆ ಮಾಡುತ್ತಿರುವ ಬಾತ್ಮಿ ಪಡೆದಿದ್ದಾರೆ. ಅರ್ಧ ಗಂಟೆಯಲ್ಲಿ ಸ್ಥಳಕ್ಕೆ ತೆರಳಿ ವಾಹನ ತಪಾಸಣೆ ಮಾಡುವ ವೇಳೆ ಹೊನ್ನಾವರ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ತಡೆ ಹಿಡಿದು ತಪಾಸಣೆ ಮಾಡಿದಾಗ ಮರಳು ತುಂಬಿರುವುದು ಕಂಡು ಬಂದಿದೆ. ಯಲ್ಲಾಪುರ ಮೂಲದ ಗಣಪತಿ ಬೆನಕೆ ವಾಹನವನ್ನು ಚಲಾಯಿಸುತ್ತಿರುವದಾಗಿ ಹಾಗೂ ಅದೇ ತಾಲ್ಲೂಕಿನ ಕಾಳಮ್ಮನಗರದ ರಾಜೇಶ ಕೃಷ್ಣ ನಾಯ್ಕ ಲಾರಿಯ ಮಾಲೀಕ ಎಂದು ಚಾಲಕ ತಿಳಿಸಿದ್ದಾನೆ. ಹೊನ್ನಾವರ ತಾಲೂಕಿನ ಮೂಡ್ಕಣಿ ಹತ್ತಿರ ಶರಾವತಿ ನದಿ ತೀರದಲ್ಲಿ ಮರಳು ತುಂಬಿಸಿಕೊಂಡು ಪರವಾನಿಗೆ ಇಲ್ಲದೆ ಸಾಗಣೆ ಮಾಡುತ್ತಿರುವ ಕುರಿತು ತಿಳಿದು ಬಂದಿದೆ. ಕುಮಟಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಅಕ್ರಮ ಮರಳುಗಾರಿಕೆಯ ಘಟನಾ ಸ್ಥಳವು ಹೊನ್ನಾವರದಲ್ಲಿ ಬರುವುದರಿಂದ ಹೊನ್ನಾವರ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿದೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.