ಗೋಕರ್ಣ: ವಿದ್ಯುತ್ ಲೈನ್ ಕಂಬದ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ವೈಮನಸ್ಸು ಹಲ್ಲೆಗೆ ಕಾರಣವಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಆಗಿದೆ. ಗೋಕರ್ಣ ಸಮೀಪದ ಗಂಗೆಕೊಳ್ಳದಲ್ಲಿನ ನಕ್ಷತ್ರ ಬೀಚ್ ಸ್ಟೇಗೆ ಪಡೆದುಕೊಂಡ ವಿದ್ಯುತ್ ಲೈನ್ ಕಂಬದ ವಿಚಾರಕ್ಕೆ ಗಂಗಾವಳಿಯ ಗಣಪತಿ ನಾರಾಯಣ ನಾಯ್ಕ ಮತ್ತು ಭಾವಿಕೊಡ್ಲಾದ ಮನೋಹರ ಸುರೇಶ ಗೌಡ, ಸುರೇಶ ಗೌಡ ನಡುವೆ ಹಿಂದಿನಿಂದ ವೈಮನಸಿತ್ತು. ಶನಿವಾರ ರಾತ್ರಿ ಗಣಪತಿ ನಾರಾಯಣ ನಾಯ್ಕರಿಗೆ ಸೇರಿದ ನಕ್ಷತ್ರ ಬೀಚ್ ಸ್ಟೇ ಆವರಣಕ್ಕೆ ಮನೋಹರ ಸುರೇಶ ಗೌಡ, ಸುರೇಶ ಗೌಡ, ಈಶ್ವರ ಗೌಡ ಮತ್ತು ಪ್ರಶಾಂತ ಗೌಡ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಮೊದಲಿಗೆ ಅವಾಚ್ಯ ಶಬ್ದಗಳಿಂದ ಬೈದು ನಂತರ ಕೆನ್ನೆಗೆ ಏಟು ಕೊಟ್ಟು, ಕಟ್ಟಿಗೆಯಿಂದ ತನ್ನ ತಲೆಯ ಮೇಲೆ ಹೊಡೆದಿದ್ದಾರೆ ಎಂದು ಗಣಪತಿ ನಾರಾಯಣ ನಾಯ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.