ಶಿರಸಿ: ಫೆ. 24, 2026 ರಿಂದ ಪ್ರಾರಂಭವಾಗಲಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯ ನಿಮಿತ್ತ ಜಾತ್ರಾ ಕಾರ್ಯಕ್ರಮದ ವೇಳಾಪಟ್ಟಿಯಂತೆ ಶ್ರೀ ದೇವಿಯ ಪ್ರತಿಷ್ಠಾ ಮಂಟಪ ಕಳಚುವ ಕಾರ್ಯಕ್ರಮ ಜ. 07ನೇ 2026 ಬುಧವಾರ ಬೆಳಿಗ್ಗೆ 11:57 ರಿಂದ 12:06 ರ ತನಕ ಇರುತ್ತದೆ. ಕಾರಣ ಅಂದು ಬೆಳಿಗ್ಗೆ 7 ಘಂಟೆಗೆ ನಡೆಯುವ ಮಹಾಪೂಜೆಯು ಮಧ್ಯಾಹ್ನ 2 ಘಂಟೆಗೆ ನಡೆಯಲಿದೆ. ಅಂದು ಬೆಳಿಗ್ಗೆ ಯಾವುದೇ ಸೇವಾ ವಿನಿಯೋಗಗಳು ನಡೆಯುವುದಿಲ್ಲ ಮತ್ತು ಅಂದು ಮಧ್ಯಾಹ್ನ 12 ಘಂಟೆಗೆ ನಡೆಯುವ ಅನ್ನಸಂತರ್ಪಣೆ ವ್ಯವಸ್ಥೆ ಇರುವುದಿಲ್ಲ. ಮಧ್ಯಾಹ್ನ 2 ಘಂಟೆ ನಂತರ ಎಂದಿನಂತೆ ನಿತ್ಯ ಪೂಜಾ ವಿನಿಯೋಗಗಳು ನಡೆಯುತ್ತವೆ. ಭಕ್ತಾದಿಗಳು ಸಹಕರಿಸಬೇಕಾಗಿ ಶ್ರೀ ಮಾರಿಕಾಂಬಾ ದೇವಸ್ಥಾನ ಧರ್ಮದರ್ಶಿಗಳು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.