ಶಿರಸಿ: 22 ವರ್ಷಗಳ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಜಾಮೀನು ಪಡೆದು ನಂತರ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಶಿರಸಿ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಎಕ್ಕಂಬಿಯ ನೀಲಪ್ಪ ಮಲ್ಲಪ್ಪ ಅಗೆಸೆಬಾಗಿಲು ವಾರಂಟ್ ಆರೋಪಿಯಾಗಿದ್ದು ಪೊಲೀಸರ ಕಣ್ಣು ತಪ್ಪಿಸಿ ಬೆಂಗಳೂರಿನಲ್ಲಿ ವಾಸವಾಗಿದ್ದ. ವಿಶೇಷ ತಂಡ ರಚಿಸಿ ಖಚಿತ ಮತ್ತು ತಾಂತ್ರಿಕ ಮಾಹಿತಿಯ ಮೂಲಕ ಪೊಲೀಸರು ಡಿಸೆಂಬರ್ 31ರಂದು ವಶಕ್ಕೆ ಪಡೆದು ಜನವರಿ 1ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ ಕನಶೆಟ್ಟಿ, ಸಿಬ್ಬಂದಿ ವಿಶ್ವನಾಥ ಭಂಡಾರಿ, ಸಂದೀಪ ನಿಂಬಾಯಿ, ರಮೇಶ್ ಮುಚ್ಚಂಡಿ, ಬಬನ್ ಕದಂ ಮತ್ತು ಉದಯ ಗುನಗಾ ವಿಶೇಷ ತಂಡವಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.