ಅಂಕೋಲಾ: ಸರ್ಕಾರದಿಂದ ವರ್ಗಾವಣೆ ಪಾವತಿ ರೂಪದಲ್ಲಿ ಬಂದಿರುವ ಹಣವನ್ನು ವೈಯಕ್ತಿಕ ಕಲ್ಯಾಣಕ್ಕೆ ಉಪಯೋಗಿಸದೆ ಸರ್ಕಾರಿ ಶಾಲೆಗೆ ಕೊಡುಗೆ ನೀಡುವ ಮೂಲಕ ಇಲ್ಲಿನ ಸಗಡಗೇರಿಯ ಅಂಬುಕೋಣ ಗ್ರಾಮದ ದಂಪತಿಗಳು ಮಾದರಿಯಾಗಿದ್ದಾರೆ. ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಇಲ್ಲಿನ ತಿಮ್ಮಪ್ಪ ಗೌಡ ಮತ್ತು ಶ್ಯಾಮಲಾ ಗೌಡ ದಂಪತಿಗಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಆಕರ್ಷಕ ಧ್ವಜಸ್ಥಂಭ ನಿರ್ಮಿಸಲು ನೀಡಿರುವ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.