ಅಂಕೋಲಾ: ಅಂಕೋಲೆಯ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯೆಂದು ಹೆಸರಾದ ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿದೆ. ಪಿ.ಎಂ. ಹೈಸ್ಕೂಲ್ ರೈತ ಭವನದಲ್ಲಿ ನಡೆದ ವಿಶೇಷ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ರಾಮಕೃಷ್ಣ ಗುಂದಿ, ಕಾರ್ಯದರ್ಶಿಯಾಗಿ ಶಿಕ್ಷಕ ಜಗದೀಶ ನಾಯಕ ಹೊಸ್ಕೇರಿ, ಗೌರವಾಧ್ಯಕ್ಷರಾಗಿ ಹಿರಿಯ ಸಾಹಿತಿಗಳಾದ ಅಮ್ಮೆಂಬಳ ಆನಂದ, ಶಾಂತಾರಾಮ ನಾಯಕ ಹಿಚ್ಕಡ, ಉಪಾಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ ಅಂಕೋಲಾ ಅಧ್ಯಕ್ಷ ಗೋಪಾಲಕೃಷ್ಣ ನಾಯಕ(ಕಾಂತ ಮಾಸ್ತರ್) ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ, ವಿದ್ಯಾ ಆರ್. ನಾಯ್ಕ, ಖಜಾಂಚಿಯಾಗಿ ಮಹಾಂತೇಶ ರೇವಡಿ, ಸಹಕಾರ್ಯದರ್ಶಿಯಾಗಿ ಜಯಶೀಲ ಆಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರೊ. ಮೋಹನ ಹಬ್ಬು ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ನೂತನ ಕಾರ್ಯಕಾರಿ ಸದಸ್ಯರಾಗಿ ರಾಮಾ ನಾಯ್ಕ, ರವೀಂದ್ರ ಕೇಣಿ, ಜೇ. ಪ್ರೇಮಾನಂದ, ನಾಗೇಂದ್ರ ನಾಯಕ ತೊರ್ಕೆ, ಫಾಲ್ಗುಣ ಗೌಡ, ಅನಂತ ನಾಯ್ಕ, ದತ್ತಾ ನಾಯ್ಕ, ಸಾವಿತ್ರಿ ನಾಯ್ಕ, ಆಮಂತ್ರಿಕರಾಗಿ ಹೊನ್ನಮ್ಮ ನಾಯಕ, ಪ್ರಭಾ ಹಬ್ಬು, ಪ್ರಭಾಕರ ಬಂಟ, ವೆಂಕಟೇಶ ಗಜಾನನ ಕಾಕರಮಠ ಆಯ್ಕೆಯಾಗಿದ್ದಾರೆ.