Flash News
Monday, August 31, 2026
Logo Flash News
Monday, August 31, 2026
Logo
ಖಾರ್ಲ್ಯಾಂಡ್ ಬಳಿ ಅಂದರ್ ಬಾಹರ್ : ಪೊಲೀಸರ ದಾಳಿಗೆ ಸಿಕ್ಕ ಎಲೆಮಾನವರು.

ಖಾರ್ಲ್ಯಾಂಡ್ ಬಳಿ ಅಂದರ್ ಬಾಹರ್ : ಪೊಲೀಸರ ದಾಳಿಗೆ ಸಿಕ್ಕ ಎಲೆಮಾನವರು.

December 27, 2025   |   Flash News

ಗೋಕರ್ಣ: ಗೋಕರ್ಣ ಸಮೀಪದ ಮೂಡಂಗಿ ಗ್ರಾಮದ ಸಾಣೆಕಟ್ಟಿಗೆ ಹೋಗುವ ರಸ್ತೆಯಲ್ಲಿನ ಖಾರ್ಲ್ಯಾಂಡ್ ಬಳಿಯ ಖುಲ್ಲಾ ಜಾಗದಲ್ಲಿ ನಾಲ್ವರು ಇಸ್ಪೀಟ್ ಎಲೆಗಳನ್ನು ಬಳಸಿ ಕಾನೂನುಬಾಹಿರ ಅಂದರ್ ಬಾಹರ್ ಆಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿನ ಸಾಣಿಕಟ್ಟಾದ ಶ್ರೀಧರ ನಾಯ್ಕ್, ಮೂಡಂಗಿಯ ಸಂದೀಪ ಹರಿಕಂತ್ರ, ದೇವಪ್ಪ ಹರಿಕಂತ್ರ ಮತ್ತು ಸೋಮೇಶ್ವರ ಹರಿಕಂತ್ರ ಆಟದಲ್ಲಿ ಮಗ್ನರಾಗಿದ್ದರು. ಇಸ್ಪೀಟ್ ಎಲೆಗಳು, ಪ್ಲಾಸ್ಟಿಕ್ ತಾಡಪತ್ರ ಹಾಗೂ ಜೂಜಾಟಕ್ಕೆ ಕಟ್ಟಿದ ಹಣದ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.