ಅಂಕೋಲಾ: ತಾಲ್ಲೂಕಿನ ಕನಕನಹಳ್ಳಿಯ ಕಿರಾಣಿ ಅಂಗಡಿಯಲ್ಲಿನ ನಗದು ಮತ್ತು ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ. ನರಸಿಂಹ ಭಾಗ್ವತರಿಗೆ ಸಂಬಂಧಿಸಿದ ಅನ್ನಪೂರ್ಣ ಮಾರ್ಟ್ ನಲ್ಲಿ ಕಳ್ಳತನವಾಗಿರುವ ಕುರಿತು ಅವರು ಪೊಲೀಸರಿಗೆ ದೂರಿದ್ದಾರೆ.
ಗುರುವಾರ ತಡರಾತ್ರಿಯ ವೇಳೆ ಅಂಗಡಿಯ ಹಿಂಬದಿಯ ಬಾಗಿಲಿಗೆ ರಂಧ್ರ ಕೊರೆದು ಚಿಲಕ ಸರಿಸಿ ಕಳ್ಳರು ಒಳನುಗ್ಗಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ, ಸಾಮಗ್ರಿಗಳು ಮತ್ತು ಐಸ್ಕ್ರೀಮ್ ಸಹ ದೋಚಿದ್ದಾರೆ ಎಂದು ಅವರು ದೂರಿದ್ದಾರೆ. ಕೊರೆಯುವ ಚಳಿಯಲ್ಲಿ ಕನಕನಹಳ್ಳಿಯ ಕಿರಾಣಿ ಅಂಗಡಿ ಐಸ್ಕ್ರೀಮ್ ಕದ್ದ ಖದೀಮರು ಯಾರು ಎಂದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.