Flash News
Monday, August 31, 2026
Logo Flash News
Monday, August 31, 2026
Logo
ಟೊಂಕದಲ್ಲಿ ವಾಹನಗಳ ಕಂಪನಕ್ಕೆ ಬೆದರಿದ ಜನರು: ರಕ್ಷಣೆಗೆ ಮೊರೆ

ಟೊಂಕದಲ್ಲಿ ವಾಹನಗಳ ಕಂಪನಕ್ಕೆ ಬೆದರಿದ ಜನರು: ರಕ್ಷಣೆಗೆ ಮೊರೆ

December 11, 2025   |   Flash News

ಹೊನ್ನಾವರ: ಟೊಂಕ ಪ್ರದೇಶದಲ್ಲಿನ ಮನೆಗಳ ಮತ್ತು ಮೀನುಗಾರರ ಸಮುದಾಯದ ಭದ್ರತೆ ಒದಗಿಸಲು  ಸಮುದ್ರ ತೀರದಲ್ಲಿನ ಕಚ್ಚಾ ರಸ್ತೆಯಲ್ಲಿ ವಿವಾಧಿತ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ನ ಭಾರೀ ಗಾತ್ರದ ವಾಹನ ಸಂಚಾರ ತಕ್ಷಣ ನಿಲ್ಲಿಸುವ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

ಮನೆಗಳ ಹತ್ತಿರದ ಕಚ್ಚಾ ರಸ್ತೆಗಳನ್ನು ಉಪಯೋಗಿಸಿಕೊಂಡು ಕಂಪನಿಯ ಬೃಹತ್ ಗಾತ್ರದ ಪ್ರತಿದಿನ ಸುಮಾರು100-150 ಸರಕು ಸಾಗಾಟ ವಾಹನಗಳ ಸಂಚರಿಸುತ್ತಿವೆ. ಇದರಿಂದ ಟೊಂಕ ಪ್ರದೇಶದಲ್ಲಿ ಕೆಳಗಿನ ಗಂಭೀರ ಸಮಸ್ಯೆಗಳು ಉಂಟಾಗುತ್ತಿವೆ. ಮನೆಗಳ ಗೋಡೆಗಳಿಗೆ ಬಿರುಕುಗಳಾಗುತ್ತಿವೆ. ಮನೆಗಳ ಮೇಲ್ಛಾವಣಿ, ಕಿಟಕಿ, ಮುಂತಾದವುಗಳಿಗೆ ಕಂಪನದಿಂದ ಹಾನಿ ಆಗುತ್ತಿದೆ. ವಾಹನಗಳ ವೇಗ ಮತ್ತು ಕಂಪನದಿಂದ ಮಕ್ಕಳು ರಸ್ತೆಗಳಲ್ಲಿ ಓಡಾಡಲು ಜೀವಭಯದಿಂದ ಹೆದರುತ್ತಿದ್ದಾರೆ. ಧೂಳು, ಶಬ್ದ, ಮತ್ತು ಬೆಳಕಿನ ತೊಂದರೆಗಳಿಂದ ಜನರು ದಿನನಿತ್ಯದ ಜೀವನದಲ್ಲಿ ಅಸಹನೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸಾಂದ್ರದಾಯಿಕ ಮೀನುಗಾರರು ಮೀನುಗಳನ್ನು ತೆಗೆದುಕೊಂಡು ಹೋಗಲು ಹಾಗೂ ಮೀನು ಒಣಗಿಸಲು ಇರುವ ಪ್ರದೇಶವನ್ನು ಕಳೆದುಕೊಳ್ಳುತ್ತಿದ್ದಾರೆ.ಕಚ್ಚಾ ಹಾಗೂ ಕುಂಠಿತ ರಸ್ತೆಯನ್ನು ಇಂತಹ ದೊಡ್ಡ ಗಾತ್ರದ ವಾಹನಗಳು ಬಳಸುವುದು ಕಾನೂನಿನಕ್ಕೂ ನಿಯಮಕ್ಕೂ ವಿರುದ್ಧವಾಗಿದೆ. 

ಅದಕ್ಕಾಗಿ, ಟೊಂಕ–ಕಾಸರಕೋಡ ಕಚ್ಚಾ ರಸ್ತೆಯ ಮೂಲಕ ನಡೆಯುತ್ತಿರುವ ಎಲ್ಲಾ ಭಾರಿ ವಾಹನ ಸಂಚಾರವನ್ನು ತಕ್ಷಣ ನಿಲ್ಲಿಸಬೇಕು. ಟೊಂಕ ಪ್ರದೇಶದ ಜನರಿಗೆ, ಮನೆಗಳಿಗೆ ಮತ್ತು ಮಕ್ಕಳಿಗೆ ಸೂಕ್ತ ಭದ್ರತೆಯನ್ನು ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಆಗ್ರಹಗಳೊಂದಿಗೆ ಸ್ಥಳೀಯ ನಾಗರಿಕರು ಮನವಿ ಸಲ್ಲಿಸಿದ್ದಾರೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.