ಗೋಕರ್ಣ: ಓಂ ಬೀಚನಲ್ಲಿ ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಸಾಗರ ಮೂಲದ ಓರ್ವ ಪ್ರವಾಸಿಗನನ್ನು ಜೀವರಕ್ಷಕ ದಳದವರು ರಕ್ಷಿಸಿದ್ದಾರೆ. ವರುಣ ಸಾಗರ (23) ರಕ್ಷಿಸಲ್ಪಟ್ಟ ಪ್ರವಾಸಿಗ. 3 ಜನರ ತಂಡದೊಂದಿಗೆ ಗೋಕರ್ಣದಲ್ಲಿ ಬ್ಯಾಂಕ ಕೆಲಸದ ನಿಮ್ಮತ್ತ ಬಂದಿದ್ದು, ಸಂಜೆಯ ವೇಳೆ ಸಮುದ್ರದಲ್ಲಿ ಈಜಾಡುತ್ತಿರುವಾಗ ಅಲೆಯ ಸುಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಕೂಡಲೇ ಇದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ಮಂಜೇಶ ಹರಿಕಂತ್ರ, ಪ್ರಭಾಕರ ಅಂಬಿಗ ಅವರು ಸ್ಥಳಿಯರ ಸಹಾಯದಿಂದ ದಡಕ್ಕೆ ತಂದು ಖಾಸಗಿ ಅಂಬುಲೆನ್ಸ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಪ್ರಾಥಮಿಕ ಸೂಕ್ತ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ