ಶಿರಸಿ: ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ಮೂವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ,ತಲಾ 20 ಸಾವಿರ ರೂ. ದಂಡ ಹಾಗೂ ಸಂತ್ರಸ್ತರಿಗೆ ಮೂವರು ಕೊಲೆಪಾತಕರಿಂದ ಒಟ್ಟೂ 75 ಸಾವಿರ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ಈ ಸಂಬಂಧ ಶುಕ್ರವಾರ ಶಿರಸಿ ನಗರದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಕಿರಣ ಕಿಣಿ ಮಹತ್ವದ ತೀರ್ಪು ಆದೇಶ ನೀಡಿದರು. ಸಹದೇವ ಹನುಮಂತ ದಡ್ಡಿಕರ್,ಸದಾನಂದ ಅನಂತ ಪಾಟೀಲ್ ಹಾಗು ರಾಮಾ ಮಾರಿತಿ ಹಬ್ಬಳಕರ್ ಕೊಲೆಗೈದ ಆರೋಪಿಗಳು. ಜಮೀನು ವ್ಯಾಜ್ಯಕ್ಕೆ ಸಂಬಂದಪಟ್ಟ ವಿಷಯದಲ್ಲಿ ಮೂವರು ಆರೋಪಿಗಳು ಸೇರಿ ಅರಣ್ಯ ವೀಕ್ಷಕರಾಗಿದ್ದ ಪರಶುರಾಮನನ್ನು ಕೊಲೆಮಾಡಿದ್ದರು. ಹಳಿಯಾಳ ತಾಲೂಕಿನ ಕರ್ಲಕಟ್ಟಾದಲ್ಲಿ ನಡೆದಿದ್ದ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಸಮರ್ಥವಾಗಿ ಮಂಡಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮಾಡುವಲ್ಲಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ ಎಂ ಮಳಗಿಕರ್ ಯಶಸ್ವಿಯಾದರು