ಕುಮಟಾ: ತಾಲೂಕಿನ ಕೊಡ್ಕಣಿ ಗ್ರಾಮದಲ್ಲಿ ಮನೆಯ ಬಾಗಿಲ ಚಿಲಕ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಇಲ್ಲಿನ ಸಾವಿತ್ರಿ ನಾರಾಯಣ ಭಟ್ಟ ಎನ್ನುವವರು ಚಿನ್ನ ಮತ್ತು ಬೆಳ್ಳಿಯ ಆಭರಣ ಕಳೆದುಕೊಂಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನವೆಂಬರ್ 17ರ ಸಂಜೆಯಿಂದ 18ರ ಮುಂಜಾನೆಯ ನಡುವಿನ ಅವಧಿಯಲ್ಲಿ ಮನೆಯ ಮುಂದಿನ ಬಾಗಿಲ ಚಿಲಕದ ಕೊಂಡಿಯನ್ನು ಮುರಿದು ಮನೆಯೊಳಗಿನ ಅಲ್ಲಿರುವ ಎರಡು ಬೆಡ್ರೂಮ್ ಗಳ ಲಾಕ್ ಸಹ ಮುರಿದು 3 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, 5000 ಮೌಲ್ಯದ ಬೆಳ್ಳಿ ನೀಲಾಂಜನ ಹಾಗೂ 5000 ನಗದನ್ನು ಕಳ್ಳತನ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.