ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52ರ ಯಲ್ಲಾಪುರ-ಅಂಕೋಲಾ ಮಾರ್ಗಮಧ್ಯೆ ಸೇಬು ತುಂಬಿದ ಲಾರಿಯೊಂದು ಪಲ್ಟಿಯಾದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ಆ್ಯಪಲ್ ತುಂಬಿದ ಲಾರಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಕಾಶ್ಮೀರದಿಂದ ಮಂಗಳೂರಿಗೆ ಆ್ಯಪಲ್ ಸಾಗಿಸುತ್ತಿದ್ದ ಲಾರಿ ಎನ್ನಲಾಗಿದೆ. ಲಾರಿ ಪಲ್ಟಿಯಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಗಸ್ತು ವಾಹನ ಸಿಬ್ಬಂದಿಗಳು ಹೆದ್ದಾರಿ ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು. ಲಾರಿಯಲ್ಲಿದ್ದ ಸೇಬುಗಳನ್ನು ಸುರಕ್ಷಿತವಾಗಿ ಪಕ್ಕಕ್ಕೆ ಇಡಲಾಯಿತು. ಕ್ರೇನ್ ಬಳಸಿ ಪಲ್ಟಿಯಾದ ಗಾಡಿ ಮೇಲೆತ್ತಿ ಪಕ್ಕಕ್ಕೆ ಸರಿಸುವ ಮೂಲಕ ಕಾರ್ಯಾಚರಣೆ ಯಶಸ್ವಿಯಾಯಿತು. ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಸಂಬಂಧಿಸಿದವರು ಘಟನಾ ಸ್ಥಳದಲ್ಲಿದ್ದರು. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.