Flash News
Tuesday, September 01, 2026
Logo Flash News
Tuesday, September 01, 2026
Logo
ಬಂದರಿನಲ್ಲಿಯೇ ಮುಳುಗಿದ ಬೋಟ್; ಲಕ್ಷಾಂತರ ರೂಪಾಯಿ ಹಾನಿ ಸಾಧ್ಯತೆ

ಬಂದರಿನಲ್ಲಿಯೇ ಮುಳುಗಿದ ಬೋಟ್; ಲಕ್ಷಾಂತರ ರೂಪಾಯಿ ಹಾನಿ ಸಾಧ್ಯತೆ

October 09, 2025   |   Flash News

ಅಂಕೋಲಾ: ಬೇಲೆಕೇರಿ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ಹಾನಿಗೊಂಡಿದೆ. ಸರಸ್ವತಿ ಅಶೋಕ ಬಾನಾವಳಿಕರ ಎಂಬುವವರ ಮಾಲೀಕತ್ವದ ಶ್ರೀ ಶಾರದಾಂಬ ಪರ್ಸಿನ್ ಬೋಟ್ ಮುಳುಗಡೆಯಾಗಿದೆ. ಮಧ್ಯರಾತ್ರಿ ಅಲೆಗಳ ರಭಸಕ್ಕೆ ನೀರು ತುಂಬಿಕೊಂಡು ಸಮುದ್ರದೊಳಗೆ ಸಂಪೂರ್ಣವಾಗಿ ಬೋಟ್ ಮುಳುಗಿದೆ. ಮುಳುಗಡೆಯಿಂದ ಲಕ್ಷಾಂತರ ರೂಪಾಯಿ ಹಾನಿ ಸಾಧ್ಯತೆ ಅಂದಾಜಿಸಲಾಗಿದೆ. ಬಂದರಿನಲ್ಲಿ ಸೂಕ್ತ ಅಲೆತಡೆಗೋಡೆ ಇಲ್ಲದ ಕಾರಣ ಜೋರಾದ ಅಲೆಗಳಿಂದ ಮೀನುಗಾರಿಕಾ ಬೋಟ್ ಗಳು ನಿರಂತರವಾಗಿ ಹಾನಿಗೆ ಒಳಗಾಗುತ್ತಿವೆ. ಘಟನಾ ಸ್ಥಳಕ್ಕೆ ಪೊಲೀಸ್, ಕರಾವಳಿ ಕಾವಲು ಪಡೆ ಮತ್ತು ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ತೆರಳಿದ್ದು ಕ್ರೇನ್ ಮೂಲಕ ಬೋಟ್ ಮೇಲೆತ್ತಲು ಕಾರ್ಯಾಚರಣೆ ನಡೆಯುತ್ತಿದೆ. ಬೋಟ್ ನ ಯಂತ್ರೋಪಕರಣಗಳು, ಮೀನುಗಾರಿಕೆ ಬಲೆಗಳು ಹಾಗೂ ಇತರೆ ಸಲಕರಣೆಗಳು ಹಾನಿಗೊಂಡಿರುವ ಸಾಧ್ಯತೆಗಳಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

 

 

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.