Flash News
Tuesday, September 01, 2026
Logo Flash News
Tuesday, September 01, 2026
Logo
ಕ್ರಿಮ್ಸ್‌ ನಲ್ಲಿ ಅಡುಗೆಭಟ್ಟನಿಂದ ಅತ್ಯಾಚಾರ ಆರೋಪ

ಕ್ರಿಮ್ಸ್‌ ನಲ್ಲಿ ಅಡುಗೆಭಟ್ಟನಿಂದ ಅತ್ಯಾಚಾರ ಆರೋಪ

September 29, 2025   |   Flash News



ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಹಿಳಾ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದು ಸ್ಥಳೀಯರನ್ನು ಘಾತಗೊಳಿಸಿದೆ. ವಿದ್ಯಾರ್ಥಿನಿಯರಿಗೆ ಉಪಹಾರ ಮತ್ತು ಊಟ ಸಿದ್ಧಪಡಿಸಲು ನೇಮಕವಾಗಿದ್ದ ಮಹಿಳಾ ಅಡುಗೆ ಸಿಬ್ಬಂದಿ ಮೇಲೆ ಸಹೋದ್ಯೋಗಿಯೇ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಹೊರಬಿದ್ದಿದೆ.

ಹೊನ್ನಾವರ ಮೂಲದ ಸುರೇಶ್ ಎಂಬ ಅಡುಗೆಭಟ್ಟ ಸೆಪ್ಟೆಂಬರ್ 8ರಂದು ಕೆಲಸ ಆರಂಭಿಸಿದ್ದರು. ಕುಮಟಾ ಮೂಲದ ಮಹಿಳೆ ಸೆಪ್ಟೆಂಬರ್ 14 ರಂದು ಅದೇ ಹಾಸ್ಟೆಲ್ ಅಡುಗೆ ಕೆಲಸಕ್ಕೆ ಸೇರಿಕೊಂಡರು.  ಅದೇ  ಮಹಿಳೆ ಈಗ ಸಹೋದ್ಯೋಗಿಯ ಮೇಲೆ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

ಮಹಿಳೆ ಕಳೆದ ಎರಡು ದಿನಗಳ ಹಿಂದೆ ಕಾರವಾರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಸುರೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.