Flash News
Tuesday, September 01, 2026
Logo Flash News
Tuesday, September 01, 2026
Logo
ಕಾಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ

ಕಾಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ

September 23, 2025   |   Flash News

 

ಅಂಕೋಲಾ: ತಾಲ್ಲೂಕಿನ ಶೆಟಗೇರಿಯ ಹಿಚ್ಕಡ ಕ್ರಾಸ್ ಬಳಿಯಲ್ಲಿ ರಸ್ತೆಯಂಚಿಗೆ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಯುವರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ತಾಲ್ಲೂಕಿನ ಹಡುವ ಗ್ರಾಮದ ಸುಧೀರ ರಾಮ ಗೌಡ ಮೃತ ಯುವಕ. ಪಟ್ಟಣದ ಹಾರ್ಡ್ವೇರ್ ಅಂಗಡಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸುಧೀರ, ಮಂಗಳವಾರ ಮುಂಜಾನೆ ಕೆಲಸಕ್ಕೆ ಎಂದು ಮನೆಯಿಂದ ತೆರಳಿದ್ದರು. ಮಧ್ಯಾಹ್ನದವರೆಗೂ ಅಂಗಡಿಗೆ ಕೆಲಸಕ್ಕೆ ಬಾರದ ಹಿನ್ನೆಲೆ ಅಂಗಡಿಯಲ್ಲಿದ್ದ ಇತರೆ ಉದ್ಯೋಗಿಗಳು ಹಲವು ಬಾರಿ ಕರೆ ಮಾಡಿದ್ದು ಕರೆ ಸ್ವೀಕೃತವಾಗದೇ ಇರುವುದರಿಂದ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಿಚ್ಕಡ ಕ್ರಾಸ್ ಸಮೀಪದಲ್ಲಿ ರಸ್ತೆಯಂಚಿಗೆ  ಸುಧೀರ ಅವರ ಬೈಕ್ ಕಂಡು ಬಂದಿದೆ ಎನ್ನಲಾಗಿ ಅಲ್ಲಿಂದ ಮೊಬೈಲ್ ಕರೆ ಮಾಡಿದ್ದಾರೆ. ಮೊಬೈಲ್ ರಿಂಗಣಿಸಿದ ದಿಕ್ಕಿನಲ್ಲಿ ಸಾಗಿದಾಗ ಸಮೀಪದಲ್ಲಿಯೇ ಮರವೊಂದಕ್ಕೆ ಹಗ್ಗದಿಂದ ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ತನಿಖೆ ಕೈಗೊಂಡದ್ದು ಹೆಚ್ಚಿನ ವಿಚಾರ ತಿಳಿದು ಬರಬೇಕಿದೆ. 
ಸೌಮ್ಯ ಸ್ವಭಾವ ಮತ್ತು ಶಿಸ್ತಿನ ನಡೆವಳಿಕೆ ಹೊಂದಿದ್ದ ಗ್ರಾಮಸ್ಥರೆಲ್ಲರಿಗೂ ಬೇಕಾಗಿ ಹಾರ್ಡ್ವೇರ್ ಅಂಗಡಿಯ ನೂರಾರು ಗ್ರಾಹಕರಿಗೆ ಆತ್ಮೀಯ ಎನಿಸಿಕೊಂಡಿದ್ದ ಸುಧೀರ ವೈಯಕ್ತಿಕ ಇಲ್ಲವೇ ಇನ್ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಪ್ರಶ್ನೆ ಕಾಡುತ್ತಿದ್ದು ತನಿಖೆ ನಂತರ ಸತ್ಯತೆ ಹೊರಬರಬೇಕಿದೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.