ಕಾರವಾರ: ಶಾಲೆಯ ಪಕ್ಕದಲ್ಲಿಯೇ ಇರುವ ಡಂಪಿಂಗ್ ಯಾರ್ಡ್ ದುರ್ವಾಸನೆಯಿಂದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ತಾಲ್ಲೂಕಿನ ಚಿತ್ತಾಕುಲದಲ್ಲಿ ನಡೆದಿದೆ.ಶಾಲೆಯ ಗೋಡೆಯ ಹೊರಭಾಗದಲ್ಲಿಯೇ ಕಸ ನಿರ್ವಹಣೆ ಘಟಕ ಇದ್ದು ಈ ಹಿಂದೆ ಉತ್ತಮವಾಗಿ ವಿಂಗಡಣೆ ಮಾಡಿ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಈಗ ನಿರ್ವಹಣೆಯ ಕೊರತೆಯಿಂದ ದುರ್ವಾಸನೆಗೆ ಕಾರಣವಾಗಿದೆ. ಸಾರ್ವಜನಿಕರು ವಿದ್ಯಾರ್ಥಿಗಳ ಪೋಷಕರು ಶಾಲೆಯ ಪಕ್ಕದಲ್ಲಿ ಡಂಪಿಂಗ್ ಯಾರ್ಡ್ ಬೇಡವೆಂದು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದು ಮನವಿಯನ್ನು ನೀಡಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ. ಇನ್ನು ಮುಂದೆ ಸಮಸ್ಯೆ ಬಗ್ಗೆ ಹರಿಯದಿದ್ದರೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ