ಅಂಕೋಲಾ: ಎಲ್ ಪಿ ಜಿ ಸಿಲಿಂಡರ್ ಅಕ್ರಮ ದಾಸ್ತಾನು ದೂರಿನ ಹಿನ್ನಲೆ ಉಪ ನಿರ್ದೇಶಕ ಮಂಜುನಾಥ ರೇವಣಕರ ಅ ನೇತೃತ್ವದ ತಂಡವು ಅವರ್ಸಾದ ಸಕಲಬೇಣದ ಪಾಂಡುರಂಗ ತಾಮ್ಸೆ ಎನ್ನುವರ ಅಂಗಡಿಯ ಮೇಲೆ ದಾಳಿ ನಡೆಸಿತು. ಪರಿಶೀಲನೆ ವೇಳೆ ಕಾನೂನು ಬಾಹಿರವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿದ್ದು 52 ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಲ್. ಪಿ.ಜಿ ನಿರ್ವಹಣಾ ಕಾಯ್ದೆಯ ಪ್ರಕಾರ ಏಳು ಸಿಲಿಂಡರ್ ಗಳಿಗಿಂತ ಹೆಚ್ಚು ದಾಸ್ತಾನು ನಿಷಿದ್ಧವಾಗಿದೆ. ಆದರೆ ಯಾವುದೇ ಅಧಿಕೃತ ವಿತರಕರಲ್ಲದೇ ಗ್ಯಾಸ್ ಏಜೆನ್ಸಿಯ ನಿರ್ವಾಹಕರ ಅಲ್ಲದೇ ಇರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಇದರ ಕುರಿತಾಗಿ ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಯಾವ ಡೀಲರ್ ಗೆ ಸಂಬಂಧಿಸಿದ್ದು ಎಂದು ತನಿಕೆಯಲ್ಲಿ ತಿಳಿದು ಬರಲಿದ್ದು ತನಿಕೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಆಹಾರ ನಿರೀಕ್ಷಕ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.