Flash News
Monday, August 31, 2026
Logo Flash News
Monday, August 31, 2026
Logo

ಶಿರಸಿ: ಐದು ದಿನಗಳ ನಂತರ ಬೆಣ್ಣೆ ಹೊಳೆಯಲ್ಲಿ ತೇಲಿ ಹೋದ ಯುವಕನ ಶವ ಪತ್ತೆ

September 11, 2025   |   Flash News

ಶಿರಸಿ: ಬೆಣ್ಣೆಹೊಳೆಯಲ್ಲಿ ತೇಲಿಹೋಗಿದ್ದ ಯುವಕನ ಶವ ಸತತ 5 ದಿನಗಳ ಕಾರ್ಯಾಚರಣೆ ನಂತರ ಪತ್ತೆಯಾಗಿದೆ. ಗೋಪಾಲ ಗೌಡ ನೇತೃತ್ವದ ಮಾರಿಕಾಂಬಾ ಲೈಫ್ ಗಾರ್ಡ್ ತಂಡದಿಂದ ಶವ ಪತ್ತೆ ಮಾಡಿದ್ದಾರೆ. ಶಿರಸಿಯ ಅರಣ್ಯ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಬೆಣ್ಣೆಹೊಳೆ ಫಾಲ್ಸ್ ವೀಕ್ಷಣೆಗೆ ಹೋಗಿದ್ದರು. ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಬಿದ್ದಿದ್ರೆ ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ಅವರಲ್ಲಿ ಓರ್ವ ವಿದ್ಯಾರ್ಥಿ ಕಾಣೆಯಾದ ದಿನವೇ ಬಂಡೆಗಳ ಮಧ್ಯೆ ಬೆನ್ನುಮೂಳೆ ಮುರಿದ ಸ್ಥಿತಿಯಲ್ಲಿ ಸಿಕ್ಕಿದ್ದರು. ರಾಹುಲ್ ಎನ್ನುವ ಯುವಕ ಪತ್ತೆಯಾಗಿರಲಿಲ್ಲ ಮಲ್ಪೆಯ ಈಶ್ವರ ಮಲ್ಪೆ ತಂಡ, ಅಗ್ನಿಶಾಮಕ ದಳದವರು, ಪೊಲೀಸರು ಹಾಗೂ ಸ್ಥಳೀಯರು ಕೂಡ ಹುಡುಕಾಟ ನಡೆಸಿದ್ದರು. ಡ್ರೋನ್ ಕ್ಯಾಮರಾ ಸಹಾಯದಿಂದ ಸುಮಾರು 2 ಕಿ. ಮೀ.ನಷ್ಟು ಆಳಕ್ಕೆ ಹೋಗಿದ್ದ ದೇಹವನ್ನು ಪತ್ತೆಹಚ್ಚಲಾಗಿದೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯ ಬಂಡಲ ಸಮೀಪ ಘಟನೆ ನಡೆದಿತ್ತು

 

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.