ಶಿರಸಿ: ತಾಲ್ಲೂಕಿನ ಬೆಣ್ಣೆ ಹೊಳೆಯಲ್ಲಿ ಈಜಲು ಹೋಗಿ ನಾಪತ್ತೆಯಾದ ಇಬ್ಬರೂ ವಿದ್ಯಾರ್ಥಿಗಳಲ್ಲಿ ಓರ್ವ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಇನ್ನೋರ್ವ ಕಾಣೆಯಾಗಿರೋ ವಿದ್ಯಾರ್ಥಿಗಾಗಿ ಶೋಧಕಾರ್ಯ ಮುಂದುವರೆದಿದೆ.
ರಾಹುಲ್ ಎನ್ನುವ ವಿದ್ಯಾರ್ಥಿಗಾಗಿ ಪೋಲಿಸರು ಹಾಗೂ ಅಗ್ನಿಶಾಮಕ ದಳದವರು ಹುಡುಕಾಟ ಮುಂದುವರೆಸಿದ್ದಾರೆ.
ಮಾರಿಕಾಂಬಾ ಲೈಫ್ ಗಾರ್ಡನ ಗೋಪಾಲ ಗೌಡ ನೇತ್ರತ್ವದ ತಂಡದಿಂದ ಕೂಡ ಶೋಧ ಕಾರ್ಯ ಚುರುಕುಗೊಂಡಿದೆ.
ಬೆಣ್ಣೆಹೊಳೆಗೆ ತೆರಳಿದ್ದ ಶಿರಸಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಲ್ಲಿ ಇಬ್ಬರೂ ನಾಪತ್ತೆಯಾಗಿದ್ದರು.