Flash News
Monday, August 31, 2026
Logo Flash News
Monday, August 31, 2026
Logo
ಹೊನ್ನಾವರ-ಸಿ.ಆರ್.ಝೆಡ್ ಕಾಯ್ದೆ ಉಲ್ಲಂಘನೆ; ಪೊಲೀಸ್ ಠಾಣೆ ತೆರವುಗೊಳಿಸಲು ಪರಿಸರ ಇಲಾಖೆ ಆದೇಶ

ಹೊನ್ನಾವರ-ಸಿ.ಆರ್.ಝೆಡ್ ಕಾಯ್ದೆ ಉಲ್ಲಂಘನೆ; ಪೊಲೀಸ್ ಠಾಣೆ ತೆರವುಗೊಳಿಸಲು ಪರಿಸರ ಇಲಾಖೆ ಆದೇಶ

September 06, 2025   |   Flash News

ಹೊನ್ನಾವರ: ಹೊನ್ನಾವರ ಕಾಸರಗೋಡ ಗ್ರಾಮದಟೊಂಕದಲ್ಲಿನ ಪೊಲೀಸ್ ಹೊರಠಾಣೆಯನ್ನು ಸಿ.ಆರ್.ಝೆಡ್ ಕಾಯ್ದೆಉಲ್ಲಂಘನೆ ಆಧಾರದಲ್ಲಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಅರಣ್ಯ, ಜೀವಪರಿಸ್ಥಿತಿಮತ್ತು ಪರಿಸರ ಇಲಾಖೆ ಅಧೀನಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈಕುರಿತು ಕಾರವಾರದ ಅರಣ್ಯ, ಜೀವಪರಿಸ್ಥಿತಿಮತ್ತು ಪರಿಸರ ಇಲಾಖೆಯ ಪ್ರಾದೇಶಿಕನಿರ್ದೇಶಕರಿಗೆ ಪತ್ರ ನೀಡಲಾಗಿದ್ದು ತೆರವುಗೊಳಿಸಲುಅವರ ಹಂತದಲ್ಲಿಯೇ ಕ್ರಮವಹಿಸಿ ಎಂದು ಸೂಚಿಸಿದ್ದಾರೆ. 
ಟೊಂಕದಲ್ಲಿ ತಾತ್ಕಾಲಿಕ ಕಂಟೇನರ್ ಮಾದರಿಯರಾಣಿಯನ್ನು ನಿರ್ಮಿಸಲಾಗಿದ್ದು ಅದನ್ನು ಯಾವುದೇ ಸಂದರ್ಭದಲ್ಲಿತೆರವುಗೊಳಿಸಬಹುದೆಂದು ಹೊನ್ನಾವರ ಪೊಲೀಸ್ ನಿರೀಕ್ಷಕವರದಿಯಲ್ಲಿ ತಿಳಿಸಿದ್ದು ಆದರೆ ಸಿ ಆರ್ಝೆಡ್ ಕಾಯ್ದೆ ಉಲ್ಲಂಘನೆಯಾದ ಬಗ್ಗೆದೂರು ಬಂದ ಹಿನ್ನೆಲೆಯಲ್ಲಿ 1A ವಲಯದಪ್ರದೇಶದಲ್ಲಿ ಹೋರಠಾಣೆ  ನಿರ್ಮಿಸಿರುವುದರಿಂದ ಕಾಯ್ದೆ ಉಲ್ಲಂಘನೆಯಾಗಿದ್ದು ತೆರವುಗೊಳಿಸಲುಕ್ರಮ ವಹಿಸುವಂತೆ ಸರ್ಕಾರದ ಅಧೀನಕಾರ್ಯದರ್ಶಿ ಸದಾನಂದ ಆದೇಶ ಹೊರಡಿಸಿದ್ದಾರೆ. 
ಟೊಂಕ ಬಂದರು ವಿರೋಧಿಸಿ ಸ್ಥಳೀಯರುನಿರಂತರವಾಗಿ ಹೋರಾಡುತ್ತಿದ್ದು, ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ ಎನ್ನಲಾಗಿದೆ. ಈ ಹಂತದಲ್ಲಿಯೇಸಿ.ಆರ್. ಝೆಡ್ಕಾಯ್ದೆ ಉಲ್ಲಂಘನೆಯ ಅನ್ವಯ ಪೊಲೀಸ್ಠಾಣೆ ತೆರವು ಪ್ರಕರಣವು ಅವರಕಾನೂನು ಹೋರಾಟಕ್ಕೆ ಇನ್ನಷ್ಟು ಬಲನೀಡಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.